ಅಂದುಕೊಂಡಿದ್ದನ್ನ ಸಾಧಿಸಬೇಕು ಅಂದ್ರೆ ಅದಕ್ಕೆ ತಕ್ಕ ಪರಿಶ್ರಮ ಇರಲೇಬೇಕು. ಜೀವನದಲ್ಲಿ ಒಮ್ಮೊಮ್ಮೆ ನಾವು ಅಂದುಕೊಳ್ಳೋದೇ ಒಂದು ಆಗೋದೇ ಒಂದು. ಆದ್ರೆ ಆ ಬೆಳವಣಿಗೆ ಪಾಸಿಟಿವ್ ಆಗಿರಬೇಕಷ್ಟೆ. ಮುಂಬೈ ಮೂಲದ ಗೌರಿ ದೇವಿದಯಾಳ್ ಅವರ ಬದುಕೇ ಇದಕ್ಕೆ ... ಮುಂಬೈ ಮೂಲದ ಗೌರಿ ದೇವಿದಯಾಳ್ ಅವರ ಬದುಕೇ ಇದಕ್ಕೆ ಸಾಕ್ಷಿ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಪದವಿ ಪಡೆದಿರೋ ಅವರು ಚಾರ್ಟರ್ಡ್ ಅಕೌಂಟಂಟ್ ಕೂಡ ಹೌದು. ಆದ್ರೀಗ ಮುಂಬೈನ ಕೊಲಾಬಾದಲ್ಲಿರೋ ದಿ ಟೇಬಲ್ ಅನ್ನೋ ಪ್ರಖ್ಯಾತ ರೆಸ್ಟೋರೆಂಟ್ನ ಮಾಲಕಿ. ಟ್ಯಾಕ್ಸ್ ಕನ್ಸಲ್ಟೆಂಟ್ ಆಗಿದ್ದ ಗೌರಿ 8 ವರ್ಷ ಲಂಡನ್ನಲ್ಲೇ ಕರ್ತವ್ಯ ನಿರ್ವಹಿಸಿದ್ದಾರೆ. ಆ ಸಮಯದಲ್ಲಿ ಅವರಿಗೆ ಪರಿಚಯವಾದವರು ಜಯ್ ಯುಸೂಫ್.