5ನೇ ವಯಸ್ಸಿಗೆ ಮನೆ ಬಿಟ್ಟ ಬಾಲಕ, ಇಂದು 130ಕ್ಕೂ ಹೆಚ್ಚು ಯುವಜನರಿಗೆ ಬದುಕಿನ ದಾರಿ ತೋರಿಸಿದ ಉದ್ಯಮಿ. ಐದನೇ ವರ್ಷದಲ್ಲಿ ಮನೆ ಬಿಟ್ಟು ಬೀದಿಪಾಲಾದ ಹುಡುಗ. ಸಾಮಾನ್ಯವಾಗಿ ಇಂಥ ಹುಡುಗರು ಸ್ಲಂ ಸೇರಿ ರೌಡಿಗಳಾಗಿ, ಪೊಲೀಸ್ ಸ್ಟೇಶನ್ ಸುತ್ತುವುದೋ ದಂಧೆ ಮಾಡುವುದೋ ಮಾಡುತ್ತಾರೆ. ಆದರೆ ಈತ ದೊಡ್ಡ ಕನಸು ಕಂಡ. ತನ್ನಂಥ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ಯಮ ಕಟ್ಟಿದ. ಮುಂಬೈನಲ್ಲಿ ಸಣ್ಣ ಕೆಫೆಯೊಂದನ್ನು ನಡೆಸುತ್ತಿರುವ ಅಮೀನ್ ಶೇಖ್ ಅವರ ಬದುಕಿನ ಕಥೆ ನಿಜಕ್ಕೂ ಸ್ಫೂರ್ತಿದಾಯಕ.