ರೀಲ್ ಮಾಡುವುದು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದು ಬರೀ ಟೈಂ ಪಾಸಲ್ಲ. ಇದರಿಂದಲೇ ತುಂಬಾ ಮಂದಿ ಹಣ ಸಂಪಾದನೆ ಮಾಡ್ತಾರೆ. ಅದೆಷ್ಟೋ ಜನ ಇದನ್ನೇ ತಮ್ಮ ಜೀವನೋಪಾಯದ ಮಾರ್ಗವಾಗಿ ಮಾಡಿಕೊಂಡಿದ್ದಾರೆ. iದ್ದ ಕೆಲಸವನ್ನೂ ಬಿಟ್ಟು ಇದನ್ನೇ ಫುಲ್ ಟೈಂ ವರ್ಕ್ ಆಗಿಯೇ ಮಾಡಿಕೊಂಡವರಿದ್ದಾರೆ. ಕೆಲಸದಿಂದ ಸಿಗುವ ಸಂಬಳದ ಎರಡು ಪಟ್ಟು ಮೂರುಪಟ್ಟು ಈ ಸೋಶಿಯಲ್ ಮಿಡಿಯಾದಿಂದಲೇ ದುಡಿಯುವವರು ಇದ್ದಾರೆ.