11 ಗುಂಡು ದೇಹ ಸೇರಿದ್ದರೂ ಉಗ್ರರೆದುರು ನಿಂತು ಸಂಸತ್ ಭವನ ರಕ್ಷಿಸಿದ ವೀರನಾರಿ: ಅಶೋಕ ಚಕ್ರ ಪುರಸ್ಕೃತೆ ಕಮಲೇಶ್ ಕುಮಾರಿ ಸಾಹಸಗಾಥೆ. ಡಿಸೆಂಬರ್ 13, 2001. ಭಾರತದ ಇತಿಹಾಸದಲ್ಲಿ ಒಂದು ಕರಾಳ ದಿನ. ಐದು ಮಂದಿ ಶಸ್ತ್ರಸಜ್ಜಿತ ಉಗ್ರರು ಕಾರಿನಲ್ಲಿ ಬಂದು ಭಾರತದ ಪ್ರಜಾಪ್ರಭುತ್ವದ ದೇಗುಲ ಸಂಸತ್ ಭವನದೊಳಗೆ ನುಗ್ಗಲು ಯತ್ನಿಸಿದರು. ಆದರೆ, ಈ ಭಯೋತ್ಪಾದಕರ ಸಂಚನ್ನ ವಿಫಲಗೊಳಿಸಿ, ಇಡೀ ಸಂಸತ್ತನ್ನ ರಕ್ಷಿಸಿದ ಕೀರ್ತಿ ಕೈಯಲ್ಲಿ ಕೇವಲ ವಾಕಿ-ಟಾಕಿ ಹಿಡಿದುಕೊಂಡಿದ್ದ ಒಬ್ಬ ಮಹಿಳಾ ಕಾನ್ಸ್ಟೇಬಲ್ಗೆ ಸಲ್ಲುತ್ತದೆ. ಅವರ ಬಳಿ ಯಾವುದೇ.