ಗರ್ಭಾವಸ್ಥೆಯೆಂದರೆ ಹೆಣ್ಣಿನ ಪಾಲಿಗೆ ಅದೊಂದು ಮರುಜನ್ಮವಿದ್ದಂತೆ. ಈ ಸಮಯದಲ್ಲಿ ಎದುರಾಗುವ ಸಣ್ಣ ಆರೋಗ್ಯ ಸಮಸ್ಯೆಗಳೂ ಕೂಡ ಕೆಲವೊಮ್ಮೆ ತಾಯಿ ಮತ್ತು ಮಗುವಿನ ಪ್ರಾಣಕ್ಕೆ ಕುತ್ತು ತರಬಹುದು. ಇಂತಹ ಗರ್ಭಧಾರಣೆಯ ತೊಡಕುಗಳನ್ನ ಅವು ಗಂಭೀರ ಸ್ವರೂಪಕ್ಕೆ ತಿರುಗುವ ಮುನ್ನವೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಾಧ್ಯವಾದರೆ? ಹೌದು, ಬಿಹಾರದ ದರ್ಭಾಂಗ ಜಿಲ್ಲೆಯಲ್ಲಿ ಇಂಥದ್ದೇ ಒಂದು ಅದ್ಭುತ ಯೋಜನೆ ನಡೆಯುತ್ತಿದೆ.