Sleeping tips: ತಲೆಯ ಪಕ್ಕದಲ್ಲೇ ಮೊಬೈಲ್ ಇಟ್ಟು ಮಲಗುತ್ತೀರಾ? ನರವಿಜ್ಞಾನ ತಜ್ಞರು ಏನಂತಾರೆ ಕೇಳಿ. ಇಂದಿನ ವೇಗದ ಜೀವನದಲ್ಲಿ ಬೆಳಗ್ಗೆ ಕಣ್ಣು ತೆರೆದ ತಕ್ಷಣ ನಾವು ಮೊದಲು ಹುಡುಕುವುದು ಮೊಬೈಲ್ ಫೋನ್ ಅನ್ನು. ರಾತ್ರಿ ಮಲಗುವ ಮುನ್ನ ನೋಡುವ ಕೊನೆಯ ವಸ್ತುವೂ ಅದೇ ಆಗಿರುತ್ತದೆ. ಹಲವರು ಮೊಬೈಲ್ ಅನ್ನು ದಿಂಬಿನ ಪಕ್ಕದಲ್ಲೇ ಇಟ್ಟುಕೊಂಡು ಮಲಗುತ್ತಾರೆ. ಸಂದೇಶಗಳು, ಕರೆಗಳು, ನೆನಪಿಸುವ ಸೂಚನೆಗಳು ಮತ್ತು ಹೊಸ ಮಾಹಿತಿಗಳಿಗಾಗಿ ಫೋನ್ ಸದಾ ಕೈಗೆಟುಕುವಂತಿರಬೇಕು ಎಂಬುದು ಅವರ ಬಯಕೆ.