35 ವರ್ಷದ ಸ್ಯಾಲರಿ, 30 ಕೋಟಿ ರೂ. ಬಹುಮಾನ ಬಡವರಿಗೆ ದಾನ ಮಾಡಿದ ಭಾರತದ ಅತಿ ಶ್ರೀಮಂತ ಬಡವ. ಭಾರತದ ಅತಿ ಶ್ರೀಮಂತ ಬಡವ ಎಂಬ ಬಿರುದು ಕೇಳಿದ ತಕ್ಷಣ ಪ್ರತಿಯೊಬ್ಬರಿಗೂ ನೆನಪಾಗುವ ಏಕೈಕ ಮಾದರಿ ವ್ಯಕ್ತಿತ್ವ ಪಾಲಂ ಕಲ್ಯಾಣಸುಂದರಂ ಅವರದ್ದು. ತಮಿಳುನಾಡಿನ ನಿವೃತ್ತ ಗ್ರಂಥಪಾಲಕರಾಗಿರುವ ಇವರು, ತಮ್ಮ ಇಡೀ ಜೀವಮಾನವನ್ನ ಸಮಾಜದ ಒಳಿತಿಗಾಗಿ ಹಾಗೂ ಬಡವರ ಸೇವೆಗಾಗಿಯೇ ಮುಡಿಪಾಗಿಟ್ಟಿದ್ದಾರೆ. ಹೌದು, ತಾವು ಕಷ್ಟಪಟ್ಟು ದುಡಿದ 35 ವರ್ಷಗಳ ಸಂಪೂರ್ಣ ವೇತನ, ನಿವೃತ್ತಿಯ ನಂತರ ಬಂದ ಪಿಂಚಣಿ.