ಗಂಡನ ಅಗಲಿಕೆ ನೋವನ್ನೇ ಶಕ್ತಿಯಾಗಿಸಿ ಸೇನೆ ಸೇರಿದ ಗೌರಿ: ವೀರ ಪತಿಯ ಸಮವಸ್ತ್ರತೊಟ್ಟು ಈಗ ಲೆಫ್ಟಿನೆಂಟ್. ಪ್ರೀತಿ ಎಂದರೆ ಕೇವಲ ಜೊತೆಯಾಗಿರುವುದಲ್ಲ, ಸಂಗಾತಿಯ ಕನಸುಗಳನ್ನ ತಮ್ಮದಾಗಿಸಿಕೊಂಡು, ಅವರ ಹೆಜ್ಜೆಗುರುತಿನಲ್ಲಿ ಮುನ್ನಡೆಯುವುದು ಕೂಡ ಹೌದು. ಮುಂಬೈನ ವಿರಾರ್ ಮೂಲದ ಯುವತಿ ಗೌರಿ ಮಹಾಡಿಕ್ ಅವರ ಜೀವನಗಾಥೆ ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು. ವಕೀಲೆಯಾಗಿ ಹಾಗೂ ಕಂಪನಿ ಸೆಕ್ರೆಟರಿಯಾಗಿ ತಮ್ಮ ವೃತ್ತಿಜೀವನವನ್ನ ಕಟ್ಟಿಕೊಂಡಿದ್ದ ಗೌರಿ, ಬಿಹಾರ ರೆಜಿಮೆಂಟ್ನ ಕ್ಯಾಪ್ಟನ್ ಪ್ರಸಾದ್ ಮಹಾಡಿಕ್ ಅವರನ್ನ ವಿವಾಹವಾಗಿದ್ದರು. ಪ್ರಸಾದ್.