ಆಯುಧ ಪೂಜೆಗೂ ಬಂತು AI: ದೇವರಿಗೆ ಆರತಿ ಬೆಳಗಿದ ಹ್ಯೂಮನಾಯ್ಡ್ ರೋಬೋಟ್, Video Viral. ಸಾಮಾನ್ಯವಾಗಿ ಆಯುಧ ಪೂಜೆಯೆಂದರೆ ನಾವು ದಿನನಿತ್ಯ ಬಳಸುವ ವಾಹನಗಳು, ಯಂತ್ರೋಪಕರಣಗಳು, ಆಯುಧಗಳು ಹಾಗೂ ಕಚೇರಿಯ ಪರಿಕರಗಳಿಗೆ ಪೂಜೆ ಸಲ್ಲಿಸುವ ಶತಮಾನಗಳ ಹಿಂದೂ ಸಂಪ್ರದಾಯ. ಆದರೆ, ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಆಯುಧ ಪೂಜೆ ಆಚರಣೆ ಈ ಬಾರಿ ಎಲ್ಲರಿಗಿಂತಲೂ ತೀರಾ ವಿಭಿನ್ನವಾಗಿತ್ತು. ಇಲ್ಲಿ ಯಂತ್ರಗಳನ್ನು ಕೇವಲ ಪೂಜಿಸುವ ವಸ್ತುವನ್ನಾಗಿ ನೋಡದೆ, ಆ ಯಂತ್ರಗಳೇ ನೇರವಾಗಿ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವಂತೆ.