ರಾಜಕೀಯದಲ್ಲಿ ಧರ್ಮದ ಪಾತ್ರವೇನು? ನೊಣವಿನಕೆರೆ ಶ್ರೀಗಳ ಮಾತಿನ ಹಿಂದಿನ ಸಂದೇಶವೇನು. ಚಿಕ್ಕಬಳ್ಳಾಪುರ: ಧರ್ಮದಲ್ಲಿ ರಾಜಕಾರಣ ಬೆರೆಯಬಾರದು, ಆದರೆ ರಾಜಕಾರಣದಲ್ಲಿ ಧರ್ಮ ಮತ್ತು ಮೌಲ್ಯಗಳು ಉಳಿಯುವಂತಾಗಲು ಧಾರ್ಮಿಕ ಗುರುಗಳು ರಾಜಕಾರಣಿಗಳಿಗೆ ಆಶೀರ್ವಾದ ನೀಡಿ, ಮಾರ್ಗದರ್ಶನ ಮಾಡಬೇಕು ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು. ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಏಳನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಧರ್ಮ ಉಳಿಯಬೇಕು.