ಥಿಯೇಟರ್ನಲ್ಲಿ 20 ರೂ. ನೀರಿನ ಬಾಟಲಿಗೆ 50 ರೂ. ವಸೂಲಿ: ಸಿನೆಪೊಲಿಸ್, ಕೋಕಾ-ಕೋಲಾಗೆ 85 ಸಾವಿರ ರೂ. ದಂಡ. ಪಟ್ನಾ: ನೀವು ಎಂದಾದರೂ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾ ನೋಡಲು ಹೋದಾಗ, ಸಾಮಾನ್ಯ ಅಂಗಡಿಗಳಿಗಿಂತ ದುಪ್ಪಟ್ಟು ಅಥವಾ ಮೂರು ಪಟ್ಟು ದುಡ್ಡು ಕೊಟ್ಟು ನೀರಿನ ಬಾಟಲಿ ಅಥವಾ ತಿಂಡಿ ತಿನಿಸುಗಳನ್ನ ಖರೀದಿಸಿ ಬೇಸರಗೊಂಡಿದ್ದೀರಾ? ಬಹುತೇಕ ಎಲ್ಲರಿಗೂ ಈ ಅನುಭವ ಆಗಿರುತ್ತದೆ. ಆದರೆ, ಇಲ್ಲೊಬ್ಬ ಗ್ರಾಹಕ ತನಗಾದ ಅನ್ಯಾಯದ ವಿರುದ್ಧ ದನಿ ಎತ್ತಿ ಬರೋಬ್ಬರಿ ದಶಕದ ಕಾಲ ಕಾನೂನು ಹೋರಾಟ ನಡೆಸಿ.