ಡಿಸೆಂಬರ್ 4ರಂದು ಬಾಕ್ಸ್ ಆಫೀಸ್ನಲ್ಲಿ ಸಲ್ಮಾನ್ ಖಾನ್ ಹಾಗೂ ಶ್ರದ್ಧಾ ಕಪೂರ್ ನಡುವೆ ಪೈಪೋಟಿ ಏರ್ಪಡಲಿದೆ. ಸಲ್ಲು ನಟನೆಯ ‘ಮಾತೃಭೂಮಿ’ ಹಾಗೂ ಶ್ರದ್ಧಾ ಅಭಿನಯದ ‘ಈಠಾ’ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಲಿವೆ. ಹಾಗಿದ್ದರೂ ಕೂಡ ಸಲ್ಮಾನ್ ಖಾನ್ ಅವರು ಶ್ರದ್ಧಾ ಕಪೂರ್ ಅವರಿಗೆ ವಿಶ್ ಮಾಡಿದ್ದಾರೆ. ಬಾಲಿವುಡ್ನ ಭಾಯ್ಜಾನ್ ಸಲ್ಮಾನ್ ಖಾನ್ ಅಭಿನಯದ ಬಹುನಿರೀಕ್ಷಿತ ‘ಮಾತೃಭೂಮಿ’ ಸಿನಿಮಾ ಡಿಸೆಂಬರ್ 4ರಂದು ತೆರೆಕಾಣಲು ಸಜ್ಜಾಗಿದೆ. ವಿಶೇಷವೆಂದರೆ, ಅದೇ ದಿನ ಶ್ರದ್ಧಾ ಕಪೂರ್ ನಟನೆಯ ‘ಈಠಾ’ ಚಿತ್ರವೂ ಸಹ ಬಿಡುಗಡೆಯಾಗಲಿದೆ.