IMD Weather Forecast: ಚಂಡಮಾರುತ ಪ್ರಸರಣ ಪ್ರಭಾವ; ಈ ಭಾಗಗಳಲ್ಲಿ ಅಕ್ಟೋಬರ್ 9ರ ವರೆಗೆ ಭಾರೀ ಮಳೆ. IMD Weather Forecast: ಕರ್ನಾಟಕದಲ್ಲಿ ಮಳೆ ಪ್ರಮಾಣ ಅಲ್ಪ ಇಳಿಕೆಯಾಗಿದೆ. ಆದರೆ, ಭಾರತದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ದಕ್ಷಿಣ ಕರಾವಳಿ ಆಂಧ್ರಪ್ರದೇಶ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ 1.5 ಕಿ.ಮೀ ಎತ್ತರದವರೆಗೆ ಇದ್ದ ಮೇಲ್ಮ ಸುಳಿಗಾಳಿ ದುರ್ಬಲಗೊಂಡಿದೆ. ಆದರೆ, ದಕ್ಷಿಣ ಭಾರತವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿದಿದೆ.