AI ಯುಗಕ್ಕೆ ಯಕ್ಷಗಾನ: ತಂತ್ರಜ್ಞಾನ ಸಹಿತ ಜಾಗತಿಕ ಪಯಣಕ್ಕೆ ಸರ್ಕಾರ ಅಸ್ತು: ಪುರುಷೋತ್ತಮ ಬಿಳಿಮಲೆ. ಬೆಂಗಳೂರು: ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಭಾಗದ ಸಾಂಪ್ರದಾಯಿಕ ಕಲೆಯಾಗಿರುವ 'ಯಕ್ಷಗಾನ'ವು ಮುಂದಿನ ತಲೆಮಾರುಗಳಿಗೆ AI ಜೊತೆಗೆ ತಲುಪಲಿದೆ. ಕೃತಕ ಬುದ್ಧಿಮತ್ತೆ (AI) ಯುಗಕ್ಕೆ ಯಕ್ಷಗಾನ ಕಾಲಿಡಲಿದೆ. ಸಾಂಸ್ಕೃತಿಕ ಅಸ್ಮಿತೆಯ ಪತ್ರೀಕವಾದ ಈ ಕಲೆಯ ಯುವ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶದಿಂದ ಮಂಗಳೂರಿನಲ್ಲಿ ಯಕ್ಷಗಾನ ವಿದ್ಯುನ್ಮಾನ ದಾಖಲೆಗಳ ಸಂಗ್ರಹಾಲಯ(ಯಕ್ಷಗಾನ ಆರ್ಕೈವ್ಸ್) ಸ್ಥಾಪಿಸುವ ಪ್ರಸ್ತಾವನೆ ಇತ್ತು. ಅದಕ್ಕೀಗ ರಾಜ್ಯ ಸರ್ಕಾರ.