Mysuru Dasara 2026: ಅರಮನೆ ನಗರಿಗೆ ಮರಳಿದ ಕ್ಯಾಪ್ಟನ್ ಅಭಿಮನ್ಯು: 8 ಕೆ.ಜಿ. ತೂಕದ ವಿಶೇಷ ಪೇಟ ತೊಡಿಸಿ ಭವ್ಯ ಸ್ವಾಗತ. ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿರುವಂತೆಯೇ, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಗಜಪಡೆಯ ಕ್ಯಾಪ್ಟನ್ ಖ್ಯಾತಿಯ ಅಭಿಮನ್ಯು ಆನೆ ಸೋಮವಾರ ಸಾಂಸ್ಕೃತಿಕ ನಗರಿಗೆ ಆಗಮಿಸಿದೆ. ಅರಮನೆ ಆವರಣದಲ್ಲಿ ಆತನಿಗೆ ಸಾಂಪ್ರದಾಯಿಕ ಹಾಗೂ ಭವ್ಯವಾದ ಸ್ವಾಗತವನ್ನು ಕೋರಲಾಯಿತು. ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನ ಹೊತ್ತಿದ್ದ ಅಭಿಮನ್ಯು, ಈ ಬಾರಿ ನಿಶಾನೆ ಆನೆಯಾಗಿ ಜಂಬೂಸವಾರಿಯಲ್ಲಿ.