Gen Z: ಮದುವೆ ವಿಚಾರದಲ್ಲಿ 90 - 80ರ ದಶಕದವರಂತೆ ಹೊಸ ತಲೆಮಾರು ಈ ತಪ್ಪು ಮಾಡಲ್ಲ; ಯೂಟ್ಯೂಬರ್ ರಾಜ್ ಶಾಮಿ ಮಾತು ವೈರಲ್. ಜೆನ್ಜೀ / Gen Zಗಳ ಮದುವೆ ಜೀವನದ ಬಗ್ಗೆ ಖ್ಯಾತ ಯೂಟ್ಯೂಬರ್, ಪಾಡ್ಕಾಸ್ಟರ್ ರಾಜ್ ಶಾಮಿ ಅವರು ಹೇಳಿರುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೆನ್ಜೀಗಳು ಮದುವೆ ವಿಚಾರದಲ್ಲಿ ಈ ಹಿಂದಿನ ತಲೆಮಾರಿಗಿಂತಲೂ ತುಂಬಾ ಸ್ಪಷ್ಟವಾಗಿದ್ದಾರೆ. ಅವರು ಮದುವೆಯ ಬಗ್ಗೆ ಹೆದರುವುದಿಲ್ಲ. ತಪ್ಪು ವ್ಯಕ್ತಿಯನ್ನು ಆರಿಸಿಕೊಂಡಾಗ ಮದುವೆ ಏನಾಗಬಹುದು ಎಂಬುದರ ಬಗ್ಗೆ ಅವರಿಗೆ ಹೆಚ್ಚು ಅರಿವಿದೆ.