ಭಾರತದಲ್ಲಿ ಮದುವೆಯಾದ ದಂಪತಿಗಳು ವಿದೇಶಿ ಕಾನೂನುಗಳು ಮತ್ತು ಕೋರ್ಟ್ಗಳ ಮೂಲಕ ವಿಚ್ಛೇದನ ಪಡೆದರೂ, ಅದು ಭಾರತೀಯ ಕಾನೂನಿನಡಿ ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬ್ರಿಟಿಷ್ ಪ್ರಜೆಯೊಬ್ಬರ ವಿರುದ್ಧದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಬ್ರಿಟಿಷ್ ಪ್ರಜೆ ಭಾರತದಲ್ಲಿ ಮಹಿಳೆಯೊಬ್ಬರನ್ನು ಮದುವೆಯಾಗಿ ನಂತರ ವಿದೇಶದಲ್ಲಿ ಡಿವೋರ್ಸ್ ನೀಡಿ ಬೇರೊಬ್ಬಳನ್ನು ಎರಡನೇ ವಿವಾಹವಾಗಿದ್ದರು. ನವದೆಹಲಿ, ನವೆಂಬರ್ 12: ಭಾರತದಲ್ಲಿ ಮದುವೆಯಾದ ವ್ಯಕ್ತಿಗಳು ವಿದೇಶಿ ಕೋರ್ಟ್ಗಳಿಂದ ವಿಚ್ಛೇದನ ಪಡೆದುಕೊಂಡು ಬಂದರೆ, ಭಾರತೀಯ ಕಾನೂನಿನಡಿ ಆ ಮದುವೆ ರದ್ದಾದಂತೆ ಪರಿಗಣನೆಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.