ಶಿವರಾಜ್ ಕೆಆರ್ ಪೇಟೆ ನಟಿಸಿರುವ ‘ಹವಾಮಾನ ವರದಿ’ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಸಿನಿಮಾನಲ್ಲಿ ನಿರೀಕ್ಷಾ ರಾವ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಶಿವರಾಜ್ ಕೆಆರ್ ಪೇಟೆ ಅವರ ಗೆಳೆಯ ಶರತ್ ಚಕ್ರವರ್ತಿ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ನಿರ್ದೇಶನದ ಸಿನಿಮಾ ಆಗಿದೆ. ಟೀಸರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನಿರೀಕ್ಷಾ ರಾವ್, ‘ನಾನು ಬಹಳ ಇಷ್ಟಪಟ್ಟು ನಟಿಸಿದ ಸಿನಿಮಾ ಇದು’ ಎಂದರು. ನಿರ್ದೇಶಕರು ಮತ್ತು ಇತರೆ ಸಹನಟರು ಕೊಟ್ಟ ಬೆಂಬಲವನ್ನು ಸ್ಮರಿಸಿದ ನಿರೀಕ್ಷಾ ರಾವ್, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ ಎಂದರು. ವಿಡಿಯೋ ನೋಡಿ.