ಮೈಸೂರು: ಮೈಸೂರು ಅರಮನೆಯ ಆಸ್ತಿ ಸ್ವಾಧೀನಕ್ಕಾಗಿ ಕಾರ್ಯಾಂಗವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೂರಿದರು.ರಾಜವಂಶ. ಆಸ್ತಿ ಸ್ವಾಧೀನಕ್ಕಾಗಿ ಜಾರಿಗೆ ತಂದಿರುವ 1996, 1998ರ ಕಾಯ್ದೆ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವೇ ಈ ಕುರಿತು ಅಂತಿಮ ತೀರ್ಮಾನ ಮಾಡುತ್ತದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮೈಸೂರು ಅರಮನೆ ಒಡೆತನದ ವಿಚಾರದ ಕುರಿತು ಈಗಾಗಲೇ ನಮ್ಮ ತಾಯಿ ಪ್ರಮೋದಾದೇವಿ ಒಡೆಯರ್ ಮಾತನಾಡಿದ್ದಾರೆ. ಇದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಹೆಚ್ಚಿನ ಪ್ರತಿಕ್ರಿಯೆ ನೀಡಲ್ಲ. ಕಾನೂನಾತ್ಮಕವಾಗಿಯೇ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದರು.ಇಂತಹ ವಿಚಾರದಲ್ಲಿ ರಾಜಕಾರಣ ಮಾಡುವುದು ದುರ್ದೈವ. ಆಸ್ತಿ ಯಾರದು ಎಂದು ತೀರ್ಮಾನ ನಡೆಯುವುದು ಕೋರ್ಟ್ನಲ್ಲಿ.