ಕಾಂಗ್ರೆಸ್ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ಒಳ್ಳೆಯ ವ್ಯಕ್ತಿ, ಕಠಿಣ ಪರಿಶ್ರಮಿ, ಉತ್ತಮ ವಾಗ್ಮಿ ಎಂದು ಹೊಗಳಿದ್ದಾರೆ. ವೈಯಕ್ತಿಕವಾಗಿ ಮೋದಿ ಬಗ್ಗೆ ಗೌರವವಿದ್ದರೂ, ಅವರ ರಾಜಕೀಯ ಸಿದ್ಧಾಂತಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ವಿರೋಧಿಗಳಾಗಿದ್ದರೂ ವೈಯಕ್ತಿಕವಾಗಿ ಸ್ನೇಹ ಇರಬಹುದು, ಸಿದ್ಧಾಂತ ಮತ್ತು ವ್ಯಕ್ತಿಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಪಿತ್ರೋಡಾ ಒತ್ತಿ ಹೇಳಿದ್ದಾರೆ. ನವದೆಹಲಿ, ನವೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಹೊಗಳಿದ್ದಾರೆ. ಮೋದಿ ಒಬ್ಬ ಒಳ್ಳೆಯ ವಾಗ್ಮಿ, ಕಠಿಣ ಪರಿಶ್ರಮಿ ಹಾಗೂ ವೈಯಕ್ತಿಕವಾಗಿ ಆತ್ಮೀಯ ವ್ಯಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.