ಕಿಶ್ತ್ವಾರ್: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ರಕ್ತದೋಕುಳಿ ಹರಿದಿದೆ. ಕಿಶ್ತ್ವಾರ್ ಜಿಲ್ಲೆಯ ದುರ್ಗಮ ದಾಚಾನ್ ಅರಣ್ಯ ಪ್ರದೇಶದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಇಬ್ಬರು ವಿಶ. ಗುರುವಾರ (ನ.12) ಮುಂಜಾನೆ ಇಬ್ಬರೂ ಸಿಬ್ಬಂದಿಯ ಗುಂಡೇಟು ತಗುಲಿದ ಮೃತದೇಹಗಳು ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.ಮೃತದೇಹಗಳು ಪತ್ತೆಯಾಗಿದ್ದರೂ, ಹುತಾತ್ಮ ಪೊಲೀಸರ ಬಳಿಯಿದ್ದ ಸರ್ಕಾರಿ ಶಸ್ತ್ರಾಸ್ತ್ರಗಳು ನಾಪತ್ತೆಯಾಗಿವೆ. ಇದು ಉಗ್ರರ ಪೂರ್ವನಿಯೋಜಿತ ಕೃತ್ಯವಾಗಿರಬಹುದು ಎಂಬ ಬಲವಾದ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಹುತಾತ್ಮರಾದ ವೀರ ಯೋಧರು ಯಾರು?ಮೃತ ದುರ್ದೈವಿಗಳನ್ನು 57 ವರ್ಷದ ಅಬಿ ಚಂದ್ ಮತ್ತು 45 ವರ್ಷದ ರಾಶ್ಪಾಲ್ ಕುಮಾರ್ ಎಂದು ಗುರುತಿಸಲಾಗಿದೆ.