ಹಾವೇರಿ: ಇತ್ತೀಚೆಗೆ ಕೆಇಎ ವತಿಯಿಂದ ನಡೆಸಲಾಗಿದ್ದ ಗ್ರಾಮ ಆಡಳಿತ ಅಧಿಕಾರಿ (VAO) ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದ ಶಂಕರ ಬನ್ನೂರ ಎಂಬಾತನ ಕಳ್ಳಾಟ ಬಯಲಾಗಿದ್ದು, ಈ ಪ್ರಕರಣದ. ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಪಡೆದಿದ್ದ ಶಂಕರ ಬನ್ನೂರ, ವಿಎಒ ಪರೀಕ್ಷೆಯಲ್ಲಿ ಭರ್ತಿ 151 ಅಂಕಗಳನ್ನು ಪಡೆದು ಟಾಪರ್ನಾಗಿ ಹೊರಹೊಮ್ಮಿದ್ದ. ಈ ಬೆಳವಣಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ವಿಚಾರಣೆ ನಡೆಸಿದಾಗ, ಇವನು ಮೊಬೈಲ್ಸಹಾಯದಿಂದ ನಕಲು ಮಾಡಿದ್ದಾಗಿ ತಿಳಿದುಬಂದಿದೆ. ಅವನು ಪರೀಕ್ಷೆಗೆ ಬಂದೇ ಇಲ್ಲ!ಈ ಪ್ರಕರಣ ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾದ ಸಂದರ್ಭದಲ್ಲಿ, ಸತೀಶ ಲಮಾಣಿ ಎಂಬ ಯುವಕ, ನಾನು ವಿಎಒ ಪರೀಕ್ಷೆ ನಡೆದ ದಿನ ಶಂಕರ ಬನ್ನೂರಿನ ಸಹಪರೀಕ್ಷಾರ್ಥಿ ಆಗಿದ್ದೆ.