2024 ರಲ್ಲಿ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ವ್ಯಾಗನ್ ಆರ್ ಎರಡನೇ ಸ್ಥಾನವನ್ನು ಪಡೆದುಕೊಂಡರೆ, ಎಂಪಿವಿ ಹ್ಯಾಚ್ಬ್ಯಾಕ್ ಆದ ಎರ್ಟಿಗಾ ಮೂರನೇ ಸ್ಥಾನವನ್ನು ಪಡೆದುಕೊಂಡಿತು. 40 ವರ್ಷಗಳ ನಂತರ, ಒಂದು ವರ್ಷದಲ್ಲಿ ಹೆಚ್ಚು ಮಾರಾಟವಾಗುವ ಕಾರು ಯಾವುದೇ ಮಾರುತಿ ಮೊಡೆಲ್ ಆಲ್ಲ. ಹೌದು, 2024ರಲ್ಲಿ ಟಾಟಾ ಪಂಚ್ ಒಟ್ಟು 2 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ಡೆಲಿವೆರಿ ನೀಡುವ ಮೂಲಕ ಬೆಸ್ಟ್ ಸೆಲ್ಲರ್ ಆಗಿ ಹೊರಹೊಮ್ಮಿದೆ. ಟಾಟಾ ಪಂಚ್ ಮೊದಲನೇ ಸ್ಥಾನವನ್ನು ಪಡೆದುಕೊಂಡರೆ, ಇತರ ಎರಡು ಸ್ಥಾನಗಳನ್ನು ಕ್ರಮವಾಗಿ ಮಾರುತಿ ವ್ಯಾಗನ್ ಆರ್ ಮತ್ತು ಮಾರುತಿ ಎರ್ಟಿಗಾ ಪಡೆದುಕೊಂಡಿದೆ.