ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮತ್ತೆ ತೀವ್ರಗೊಂಡಿವೆ. ಕಿಸ್ಟ್ವಾರ್ನಲ್ಲಿ ಗುಂಡಿನ ಚಕಮಕಿ ಬಳಿಕ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ. ಮತ್ತೊಂದೆಡೆ, ಕುಲ್ಗಾಮ್ನಲ್ಲಿ ಸಿಆರ್ಪಿಎಫ್ ಚೆಕ್ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಈ ಘಟನೆಗಳು ಭದ್ರತಾ ಪಡೆಗಳಿಗೆ ಸವಾಲಾಗಿದ್ದು, ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಜಮ್ಮು, ನ.11: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಚಟುವಟಿಕೆಗಳು ಮತ್ತೆ ತೀವ್ರಗೊಂಡಿದ್ದು, ಒಂದೇ ದಿನ ಎರಡು ಬೇರೆ ಬೇರೆ ಕಡೆ ಭೀಕರ ಘಟನೆಗಳು ಸಂಭವಿಸಿ ಭದ್ರತಾ ಪಡೆಗಳಿಗೆ ಸವಾಲು ಎದುರಾಗಿದೆ.