ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಳವಾಗಿದ್ದ ಬೊಲೆರೊ ಕ್ಯಾಂಪರ್ ವಾಹನವನ್ನು ಕುಡಚಿ ಪೊಲೀಸರು ಪತ್ತೆಹಚ್ಚಿದ್ದು, ಅಂತರರಾಜ್ಯ ವಾಹನ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ಕಳವಾಗಿದ್ದ ಬೊಲೆರೊ ಕ್ಯಾಂಪರ್ ವಾಹನವನ್ನು ಕುಡಚಿ ಪೊಲೀಸರು ಪತ್ತೆಹಚ್ಚಿದ್ದು, ಅಂತರರಾಜ್ಯ ವಾಹನ ಕಳ್ಳನನ್ನು ಬಂಧಿಸಿದ್ದಾರೆ. ಚಿಂಚಲಿ ಗ್ರಾಮದ ವ್ಯಾಪಾರಿಯಾದ ಅರುಣ ಸಿದಲಿಂಗ ಕುಂಬಾರ (46) ಎಂಬುವವರು ತಮ್ಮ ಗೋಡೌನ್ ಮುಂದೆ ಮಹೀಂದ್ರಾ ಕಂಪನಿಯ ಬೊಲೆರೊ ಕ್ಯಾಂಪರ್ ವಾಹನವನ್ನು ನಿಲ್ಲಿಸಿದ್ದರು. ಅಕ್ಟೋಬರ್ 26ರ ರಾತ್ರಿ 9.30ರಿಂದ ಅಕ್ಟೋಬರ್ 27ರ ಬೆಳಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ಸುಮಾರು ₹2.