ಕಲಬುರಗಿ : ಕಾಶಿ ಜ್ಞಾನಸಿಂಹಾಸನ ಮಹಾಪೀಠದಿಂದ ಸಾಧಕ ಮಹಿಳೆಯೋರ್ವರಿಗೆ ಪ್ರತಿವರ್ಷ ಕೊಡಮಾಡುವ ಮಾಲತಿ ಮಹಾರುದ್ರಪ್ಪ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರವನ್ನು ಪ್ರಕಟಿಸಲಾಗಿದ್ದು, 2026ನೇ ಸ. ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದ್ದು, ನ.29ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.ಜೇವರ್ಗಿ ತಾಲೂಕಿನ ಶಾಕಾಪುರದಲ್ಲಿರುವ ಕಾಶೀ ಪೀಠದ ಶಾಖಾ ತಪೋವನ ಮಠದಲ್ಲಿ ನ.29 ರಂದು ನಡೆಯಲಿರುವ ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 37ನೇ ಪೀಠಾರೋಹಣ ವರ್ಧಂತಿ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ.ಸಿದ್ಧರಾಮ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.ಪೀಠಾರೋಹಣ ವರ್ಧಂತಿ ಮಹೋತ್ಸವದ ಪ್ರಯುಕ್ತ ಅಂದು ಬೆಳಗ್ಗೆ 9ಕ್ಕೆ ಜಗದ್ಗುರುಗಳ ಸುವರ್ಣ ಕಿರೀಟಧಾರಣೆ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ.