ಊಖಿಮಠ : ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಿಮಾಲಯ ಪರ್ವತದಲ್ಲಿರುವ ಕೇದಾರನಾಥ ಮಂದಿರದ ಬಾಗಿಲು ಬುಧವಾರ ಮುಚ್ಚಲಾಗಿದೆ.ಸಂಪ್ರದಾಯದಂತೆ 6 ತಿಂಗಳು ಮಾತ್ರ ಬಾಗಿಲು ತೆರೆದಿರುವ ಕೇದಾರನಾಥ ದೇವ. ಕೇದಾರ ಜಗದ್ಗುರು ರಾವಲ್ ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರ ಮಾರ್ಗದರ್ಶನದಂತೆ, ಪ್ರಧಾನ ಅರ್ಚಕ ಶಿವಶಂಕರಲಿಂಗ ಅವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.ಕೇದಾರನಾಥನ ದೇವಾಲಯವು ಆರು ತಿಂಗಳು ತೆರೆದಿದ್ದರೆ ಇನ್ನಾರು ತಿಂಗಳು ಮುಚ್ಚಿರುತ್ತದೆ. ಈ ವೇಳೆ ಕೇದಾರನಾಥನ ಉತ್ಸವ ಮೂರ್ತಿಗೆ ಊಖಿಮಠದಲ್ಲಿ ಪೂಜೆ ನಡೆಯುತ್ತದೆ. ಮುಂದಿನ ಅಕ್ಷಯ ತೃತೀಯಾದ ಶುಭ ಮುಹೂರ್ತದಲ್ಲಿ ಮರಳಿ ಬಾಗಿಲು ತೆರೆಯಲಿದೆ.