ನವದೆಹಲಿ: ಐಪಿಎಲ್ 2027ರ ಹರಾಜು ಪ್ರಕ್ರಿಯೆಗೂ ಮುನ್ನವೇ ಮುಂಬೈ ಇಂಡಿಯನ್ಸ್ ತಮ್ಮ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಟ್ರೇಡ್ ಮೂಲಕ ಪಂಜಾಬ್ ಕಿಂಗ್ಸ್ಗೆ ಕಳುಹಿಸಿದ್ದು, ಅ. ಸಾಕಷ್ಟು ವದಂತಿಗಳನ್ನು ಕೊನೆಗೂ ನಿಜವಾಗಿಸಿದ ಎಂಐ ನಡೆಗೆ ಇದೀಗ ಪಾಂಡ್ಯ ಕೊಟ್ಟಿರುವ ಫಸ್ಟ್ ರಿಯಾಕ್ಷನ್ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದೆ. ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರಿಸಿರುವ ಫ್ರಾಂಚೈಸಿ, ಪಂಜಾಬ್ ತಂಡದ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ರನ್ನು ಅವರ ಸ್ಥಾನಕ್ಕೆ ಟ್ರೇಡಿಂಗ್ ಪ್ರಕ್ರಿಯೆ ಮುಖಾಂತರ ಕರೆದುಕೊಂಡಿದೆ.