ಎಸ್ಬಿಐ ರಿಸರ್ಚ್ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (Q2) ಭಾರತದ ಜಿಡಿಪಿ ಬೆಳವಣಿಗೆಯು ಶೇ. 7.8 ದಾಖಲಾಗಬಹುದು. ಇದು ಆರ್ಬಿಐನ ಶೇ. 7.2 ಅಂದಾಜನ್ನು ಮೀರಿಸಿದ ನಿರೀಕ್ಷೆಯಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲಿರುವುದನ್ನು ಎಸ್ಬಿಐ ರಿಸರ್ಚ್ ಗುರುತಿಸಿದೆ. ಭಾರತದ ಅಭಿವೃದ್ಧಿ ಮಾದರಿಯು, ಅದರಲ್ಲೂ ಮೋದಿ ಕಾಲದಲ್ಲಿ ಆದಾಯವನ್ನಾಗಲೀ, ಉಳಿತಾಯವನ್ನಾಗಲೀ, ಉದ್ಯೋಗವನ್ನಾಗಲೀ ಹೆಚ್ಚಿಸುತ್ತಿಲ್ಲವಾದ್ದರಿಂದ ಜನಸಾಮಾನ್ಯರ ಖರೀದಿ ಸಾಮರ್ಥ್ಯವನ್ನೂ ಹೆಚ್ಚಿಸುತ್ತಿಲ್ಲ.