ವೈರ್ಲೆಸ್ ತಂತ್ರಜ್ಞಾನಗಳಲ್ಲಿ ಉದ್ದಿಮೆಯ ನಾಯಕತ್ವ ಸ್ಥಾನದಲ್ಲಿರುವ ಕ್ವಾಲ್ಕಾಮ್ ಇನ್ಕಾರ್ಪೊರೇಟೆಡ್ನ ಹೂಡಿಕೆ ಅಂಗವಾದ ಕ್ವಾಲ್ಕಾಮ್ ವೆಂಚರ್ಸ್ ಜಿಯೋ ಪ್ಲಾಟ್ಫಾರ್ಮ್ಸ್ನಲ್ಲಿ 730 ಕೋಟಿ ರೂ.ಗಳವರೆಗೆ ಹೂಡಿಕೆ ಮಾಡಲು ಒಪ್ಪಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ರಿಲಯನ್ಸ್ ಇಂಡಸ್ಟ್ರೀಸ್) ಹಾಗೂ ಜಿಯೋ ಪ್ಲಾಟ್ಫಾರ್ಮ್ಸ್ ಲಿಮಿಟೆಡ್ (ಜಿಯೋ ಪ್ಲಾಟ್ಫಾರ್ಮ್ಸ್) ಇಂದು ಘೋಷಿಸಿದ್ದು 4.91 ಲಕ್ಷ ಕೋಟಿ ರೂ.ಗಳ ಈಕ್ವಿಟಿ ಮೌಲ್ಯ ಹಾಗೂ 5.16 ಲಕ್ಷ ಕೋಟಿ ರೂ.ಗಳ ಎಂಟರ್ಪ್ರೈಸ್ ಮೌಲ್ಯದಲ್ಲಿ ಈ ಹೂಡಿಕೆಯು ಕಾರ್ಯಗತವಾಗಲಿದೆ. ಕ್ವಾಲ್ಕಾಮ್ ವೆಂಚರ್ಸ್ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್ನಲ್ಲಿ ಜಿಯೋ ಪ್ಲಾಟ್ಫಾರ್ಮ್ಸ್ನ 0.15% ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ.