ಆಧುನಿಕ ಎಐ ತಂತ್ರಜ್ಞಾನದ ಪರ್ಫೆಕ್ಟ್ ಲಿಪ್ಸಿಂಕ್ ಡಬ್ಬಿಂಗ್ ಮೂಲಕ ಗಮನಸೆಳೆದಿರುವ 'ರಾಮಾಯಣ' ಸಿನಿಮಾ ಕನ್ನಡದಲ್ಲಿ 50 ಕೋಟಿ ಕಲೆಕ್ಷನ್ ಮಾಡಿದೆ. ಕೇವಲ 6 ದಿನಗಳಲ್ಲಿ ವಿಶ್ವಾದ್ಯಂತ 823 ಕೋಟಿ ಗಳಿಸಿರುವ 'ರಾಮಾಯಣ', ಯಶ್ ಅವರ 'ಟಾಕ್ಸಿಕ್' ಸಿನಿಮಾದ ಒಟ್ಟು ಲೈಫ್ಟೈಮ್ ಕಲೆಕ್ಷನ್ ದಾಖಲೆಯನ್ನು ಒಂದೇ ವಾರದಲ್ಲಿ ಭೇದಿಸಿ ಹೊಸ ಇತಿಹಾಸ ಬರೆದಿದೆ. ಬಾಕ್ಸ್ ಆಫೀಸ್ನಲ್ಲಿ ರಿಲೀಸ್ ಆದ ದಿನದಿಂದಲೂ ಕಲೆಕ್ಷನ್ ಸುನಾಮಿ ಎಬ್ಬಿಸಿರುವ 'ರಾಮಾಯಣ' ಸಿನಿಮಾ ಇದೀಗ ಕನ್ನಡದಲ್ಲೂ ಹೊಸ ಇತಿಹಾಸ ಬರೆದಿದೆ. ಸಾಮಾನ್ಯವಾಗಿ ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾಗಳು ದೊಡ್ಡ ಮಟ್ಟದ ಕಲೆಕ್ಷನ್ ಮಾಡುವುದಿಲ್ಲ ಎಂಬ ಮಾತಿದೆ.