ಹುದ್ದೆ ಉಳಿಸಿಕೊಳ್ಳಲು ಸಚಿವ ಶಿವಲಿಂಗೇಗೌಡಗೆ 75 ಲಕ್ಷ ರೂ ಲಂಚ ನೀಡಿದ್ದಾರೆಂಬ ಕೇಂದ್ರ ಸಚಿವ ಹೆಚ್ಡಿಕುಮಾರಸ್ವಾಮಿ ಆರೋಪವನ್ನು ಇತ್ತೀಚೆಗೆ ಹಾಸನ ಡಿಸಿ ಲತಾಕುಮಾರಿ ಅದೆಲ್ಲವೂ ಸುಳ್ಳು ಎಂದಿದ್ದರು. ಇದೀಗ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿರುವ ಅವರು, ಹೆಚ್ಡಿಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಹಾಸನ, ನವೆಂಬರ್ 10: ಜಿಲ್ಲಾಧಿಕಾರಿ ಕೆಎಸ್ ಲತಾಕುಮಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಲತಾಕುಮಾರಿ ಅವರು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.