ಸೋನಿಯಾ ಗಾಂಧಿ ಅವರ ಹೊಸ ಆತ್ಮಚರಿತ್ರೆ 'ಬಿಲಾಂಗಿಂಗ್' ಪುಸ್ತಕದಲ್ಲಿ ಮೇನಕಾ ಗಾಂಧಿ ಜೊತೆಗಿನ ಕಹಿ ಸಂಬಂಧ ಮತ್ತು ಗಾಂಧಿ ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳನ್ನು ವಿವರಿಸಿದ್ದಾರೆ. ಮೇನಕಾ ರಾಜೀವ್-ಸೋನಿಯಾರನ್ನು ಶತ್ರುಗಳಂತೆ ನೋಡುತ್ತಿದ್ದರು, ಸಂಜಯ್ ನಿಧನದ ಬಳಿಕ ರಾಜಕೀಯ ಭಿನ್ನಾಭಿಪ್ರಾಯಗಳು ಹೆಚ್ಚಿ ಕುಟುಂಬದಿಂದ ಬೇರ್ಪಟ್ಟರು ಎಂಬುದನ್ನು ಸೋನಿಯಾ ಪ್ರಾಮಾಣಿಕವಾಗಿ ಬಿಚ್ಚಿಟ್ಟಿದ್ದಾರೆ. ನವದೆಹಲಿ, ನವೆಂಬರ್ 10: ಗಾಂಧಿ ಕುಟುಂಬದೊಳಗಿನ ಸಂಬಂಧಗಳು, ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಸಂಘರ್ಷಗಳ ಬಗ್ಗೆ ಹಲವು ವರ್ಷಗಳಿಂದ ಚರ್ಚೆಗಳು ನಡೆಯುತ್ತಿವೆ. ಇದೀಗ ಕಾಂಗ್ರೆಸ್ನ ಹಿರಿಯ ನಾಯಕಿ ಸೋನಿಯಾ ಗಾಂಧಿ ತಮ್ಮ ಹೊಸ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕದಲ್ಲಿ ಕುಟುಂಬದೊಳಗಿನ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.