ಬೆಂಗಳೂರಿನ ಮಲ್ಲೇಶ್ವರಂ ಮೆಟ್ರೋ ನಿಲ್ದಾಣದ ಬಳಿ ಪ್ರಯಾಣಿಕರ ಸುರಕ್ಷತೆಗೆ ಗಂಭೀರ ಅಪಾಯ ಎದುರಾಗಿದೆ. ಸ್ಥಗಿತಗೊಂಡ ಅಪಾರ್ಟ್ಮೆಂಟ್ ಕಾಮಗಾರಿಯ ತುಕ್ಕು ಹಿಡಿದ ಕಬ್ಬಿಣ, ಕಲ್ಲುಗಳು ಮೆಟ್ರೋ ಪ್ರಯಾಣಿಕರ ಕಾಲುದಾರಿಯ ಮೇಲೆ ಬೀಳುತ್ತಿದ್ದು, ಆತಂಕ ಸೃಷ್ಟಿಸಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಮತ್ತು ಪೊಲೀಸರು ದೂರು ನೀಡಿದ್ದರೂ, ಬಿಎಂಆರ್ಸಿಎಲ್ ಹಾಗೂ ಬಿಬಿಎಂಪಿ ಇಂದ ಪರಿಹಾರ ದೊರೆತಿಲ್ಲ. ಬೆಂಗಳೂರು, ನ.10; ನಮ್ಮ ಮೆಟ್ರೋ ಪ್ರಯಾಣಿಕರು ಮಲ್ಲೇಶ್ವರಂನ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣದ ಬಳಿ ತೀವ್ರ ಆತಂಕ ಎದುರಿಸುತ್ತಿದ್ದಾರೆ. ನಿಲ್ದಾಣದ ಸುತ್ತಮುತ್ತಲ ಪ್ರದೇಶದಲ್ಲಿ ಸ್ಥಗಿತಗೊಂಡಿರುವ ಎರಡು ಬೃಹತ್ ಅಪಾರ್ಟ್ಮೆಂಟ್ ಕಾಮಗಾರಿಗಳಿಂದಾಗಿ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆ ಉಂಟಾಗಿದೆ.