ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಫಿನಾಲೆಗೂ ಮುನ್ನ ನಾಮಿನೇಷನ್ ಪ್ರಕ್ರಿಯೆ ರಂಗು ಪಡೆದುಕೊಂಡಿದೆ. ಪರಿಷತ್ ಮಾದರಿಯಲ್ಲಿ ನಡೆದ ವಿಶಿಷ್ಟ ನಾಮಿನೇಷನ್ನಲ್ಲಿ ಮಂಜು ಅಧ್ಯಕ್ಷರಾಗಿ ಭಾಗವಹಿಸಿದ್ದರು. ವಾದ-ವಿವಾದಗಳ ನಂತರ ತಾಂಡವ್, ಜಗದೀಶ್, ಗಗನ್, ಪ್ರಶಾಂತ್, ಕಿರಣ್ ಶಾಸ್ತ್ರಿ, ಆಸಿಯಾ ಮತ್ತು ಸೋನಿಕಾ ಈ ವಾರ ಎಲಿಮಿನೇಷನ್ ಫೈಟ್ಗೆನಾಮಿನೇಟ್ ಆಗಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಈಗಾಗಲೇ ಎರಡು ತಿಂಗಳು ಪೂರೈಸಿದೆ. ಅದಕ್ಕೂ ಮೊದಲು ನಾಮಿನೇಷನ್ ಸಾಕಷ್ಟು ರಂಗು ಪಡೆದುಕೊಂಡಿದೆ. ಮೊದಲೆಲ್ಲ ನೇರವಾಗಿ ನಾಮಿನೇಟ್ ಮಾಡಲು ಅವಕಾಶ ನೀಡಲಾಗುತ್ತಾ ಇತ್ತು. ಆದರೆ, ಈ ವಾರ ನಾಮಿನೇಷನ್ ಪ್ರಕ್ರಿಯೆ ಬದಲಾಯಿಸಲಾಗಿದೆ. ಈ ವಾರ ಪರಿಷತ್ ಮಾದರಿಯಲ್ಲಿ ಬಿಗ್ ಬಾಸ್ ಮನೆ ರೆಡಿ ಮಾಡಲಾಗಿದೆ.