ನವದೆಹಲಿ: ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಪೃಥ್ವಿ ಶಾ ( Prithvi Shaw ) ಜನ್ಮದಿನದ ಅಂಗವಾಗಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಕೃತಿ ಅಗರ್ವಾಲ್ ( Akriti Agarwal ) ಹಂಚಿಕೊಂಡ ಭಾವು. ಪೃಥ್ವಿ ಶಾ ಅವರ 27ನೇ ಜನ್ಮದಿನದ ಸಂದರ್ಭದಲ್ಲಿ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ವಿಶೇಷವಾಗಿ ಶುಭಕೋರಿದ್ದು, ಕಷ್ಟ-ಸುಖ ಏನೇ ಬರಲಿ ನಾನು ಯಾವಾಗಲೂ ನಿನಗೆ ಬೆಂಬಲವಾಗಿ ಇರುತ್ತೇನೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಈ ಇನ್ಸ್ಟಾಗ್ರಾಮ್ ಪೋಸ್ಟ್ಗೆ ಮಾಜಿ ಆಟಗಾರ ಯುವರಾಜ್ ಸಿಂಗ್ ತಮ್ಮದೇ ಶೈಲಿಯಲ್ಲಿ ವ್ಯಂಗ್ಯ ಮತ್ತು ಹಾಸ್ಯಭರಿತ ಕಾಮೆಂಟ್ ಮಾಡುವ ಮೂಲಕ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿದ್ದಾರೆ..