ಜೆರುಸಲೇಂ: ಇಸ್ರೇಲ್ನ ದೀರ್ಘಕಾಲದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಹೊಸ ಸಂಸತ್ತಿನ ರಚನೆ ರಾಜಕೀಯ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಮಂಗಳವಾರದಿಂದ ಹೊಸ ಸಂಸತ್ತು (ಕ್ನೆಸೆಟ್) ಕಾರ್ಯಾ. ಮಂಗಳವಾರದಿಂದ ಹೊಸ ಸಂಸತ್ತು (ಕ್ನೆಸೆಟ್) ಕಾರ್ಯಾರಂಭ ಮಾಡಲಿದ್ದು, ಈ ಬಾರಿ ನೆತನ್ಯಾಹು ಅವರ ಬಣಕ್ಕೆ ಬಹುಮತದ ಬೆಂಬಲ ಇಲ್ಲದಿರುವುದು ಅವರ ಪಾಲಿಗೆ ದೊಡ್ಡ ಸವಾಲಾಗಿದೆ.ಮಾಜಿ ಸೇನಾ ಮುಖ್ಯಸ್ಥ ಗಾಡಿ ಐಸೆನ್ಕೋಟ್ ಅವರು ನೂತನ ಸರ್ಕಾರ ರಚಿಸಲು ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರಿಂದ ಭಾನುವಾರ ಅಧಿಕೃತ ಆಹ್ವಾನ ಪಡೆದಿದ್ದಾರೆ. ಆದರೆ ಐಸೆನ್ಕೋಟ್ ಮತ್ತು ನೆತನ್ಯಾಹು ಇಬ್ಬರ ಬಳಿಯೂ ಸರ್ಕಾರ ರಚಿಸಲು ಅಗತ್ಯವಾದ ಬಹುಮತ ಇಲ್ಲದ ಕಾರಣ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ.