IND vs NZ ODI: ಇಂದು ಹ್ಯಾಮಿಲ್ಟನ್ನಲ್ಲಿ ನಡೆಯಬೇಕಿದ್ದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯವನ್ನು ಇದೀಗ ಬಿಡದೆ ಸುರಿಯುತ್ತಿರುವ ಮಳೆಯಿಂದ ರದ್ದುಗೊಳಿಸಲಾಗಿದೆ.ಮಳೆಯ ಕಾ. ಟಾಸ್ ಗೆದ್ದ ಶುಭಮನ್ ಗಿಲ್, ಪ್ಲ್ಯಾನಿಂಗ್ ಪ್ರಕಾರ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಕೊನೆಗೂ ವ್ಯರ್ಥವಾಯಿತು. ಆದರೆ, ಮಳೆಯ ಅಡಚಣೆಯಿಂದಾಗಿ ಟಾಸ್ ಪ್ರಕ್ರಿಯೆಯನ್ನು ಬೆಳಗ್ಗೆ 9 ಗಂಟೆಗೆ ಮುಂದೂಡಲಾಯಿತು. ಟಾಸ್ ನಡೆದ ತಕ್ಷಣವೇ, ಮಳೆ ಮತ್ತೆ ಕ್ರೀಡಾಂಗಣವನ್ನು ಆವರಿಸಿಕೊಂಡ ಕಾರಣ, ಕೆಲವು ಗಂಟೆಗಳ ಕಾಲ ಕಾಯಲಾಯಿತು. ಮತ್ತು 50 ಓವರ್ ಪಂದ್ಯವನ್ನು 40 ಓವರ್ಗೆ ಇಳಿಸಲಾಯಿತು. ಇಷ್ಟಾದರೂ ನಿಲ್ಲದೆ, ಪದೇ ಪದೇ ಸುರಿದ ಮಳೆಯಿಂದ ಆಟ ಆರಂಭಿಸಲು ಸಾಧ್ಯವೇ ಆಗಲಿಲ್ಲ..