ಬೆಂಗಳೂರು: ಪತ್ನಿ ಸೇರಿದಂತೆ ತನ್ನ ಕುಟುಂಬದ ಏಳು ಮಂದಿಯನ್ನು ಕೇವಲ 16 ದಿನಗಳ ಅವಧಿಯಲ್ಲಿ ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ಕ್ಯಾಬ್ ಚಾಲಕ ಇಂದೂಶೇಖರ್ ಪ್ರಕರಣದಲ್ಲಿ ಮತ್ತಷ್ಟು. ಹತ್ಯೆಗೀಡಾದವರ ಮೊಬೈಲ್ ಫೋನ್ಗಳನ್ನೇ ಬಳಸಿಕೊಂಡು ಅವರ ಸಂಬಂಧಿಕರಿಗೆ ಸಂದೇಶ ಕಳುಹಿಸುತ್ತಿದ್ದ ಆರೋಪಿ, ಕುಟುಂಬಸ್ಥರು ಎಲ್ಲೋ ಪ್ರಯಾಣದಲ್ಲಿದ್ದಾರೆ ಅಥವಾ ಮನೆಯಿಂದ ಹೊರಗಿದ್ದಾರೆ ಎಂಬ ಭಾವನೆ ಮೂಡಿಸಿದ್ದ ಎನ್ನಲಾಗಿದೆ.ಅಕ್ಟೋಬರ್ 16ರಂದು ಮೊದಲ ಕೊಲೆಪೊಲೀಸರ ಪ್ರಕಾರ, ಈ ಸರಣಿ ಹತ್ಯೆಗಳು ಅಕ್ಟೋಬರ್ 16ರಂದು ಆರಂಭವಾಗಿವೆ. ಅಂದು ಇಂದೂಶೇಖರ್ ತನ್ನ ಪತ್ನಿ ಸುನೀತಾಳನ್ನು ಗ್ರೈಂಡಿಂಗ್ ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಮೃತದೇಹವನ್ನು ನಂದಿ ಬೆಟ್ಟಕ್ಕೆ ಕೊಂಡೊಯ್ದು ವಿಲೇವಾರಿ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.