ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ತಮ್ಮ ಮೇಲಿನ ವೈಯಕ್ತಿಕ ಸಂಬಂಧದ ಆರೋಪಗಳ ತಪ್ಪೊಪ್ಪಿಗೆ ಬೆನ್ನಲ್ಲೇ ಬಿಲಿಯನ್ಗಟ್ಟಲೆ ಸಂಪತ್ತನ್ನು ಕಳೆದುಕೊಂಡಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ನ ವಿಶ್ವದ ಅಗ್ರ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದು 12ನೇ ಸ್ಥಾನಕ್ಕೆ ಕುಸಿದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲೂ ಅವರು 8ರಿಂದ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ನವದೆಹಲಿ, ನವೆಂಬರ್ 10: ವಿಶ್ವದ ಅತಿದೊಡ್ಡ ಎಐ ಚಿಪ್ ತಯಾರಕ ಸಂಸ್ಥೆಯಾದ ಎನ್ವಿಡಿಯಾ (Nvidia) ಸಿಇಒ ಜೆನ್ಸನ್ ಹುವಾಂಗ್ ಅವರು ಚೀನಾದ ಗೂಢಚಾರಿ ಶಂಕಿತಳೊಬ್ಬಳೊಂದಿಗೆ ಸಂಬಂಧ ಹೊಂದಿರುವ ವಿಚಾರ ಬೆಳಕಿಗೆ ಬರುತ್ತಲೇ ಜಾಗತಿಕ ತಂತ್ರಜ್ಞಾನ ಮತ್ತು ಆರ್ಥಿಕ ವಲಯದಲ್ಲಿ ತಲ್ಲಣ ಮೂಡಿದೆ.