ಕ್ರಿಕೆಟ್ ಜಗತ್ತಿನ ದೈತ್ಯ ಲೀಗ್ ಐಪಿಎಲ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗುತ್ತಿದೆ. 2028 ರ ಆವೃತ್ತಿಯ ವೇಳೆಗೆ ಟೂರ್ನಿಯಲ್ಲಿ ತಂಡಗಳ ಸಂಖ್ಯೆಯನ್ನು 12 ಕ್ಕೆ ಹೆಚ್ಚಿಸುವ ಬೃಹತ್ ಯೋಜನೆಯನ್ನು ಬಿಸಿಸಿಐ ಕೈಗೆತ್ತಿಕೊಂಡಿದೆ. ಈ ವಿಸ್ತರಣೆಯು ಕೇವಲ ಬಿಸ್ನೆಸ್ ಮೌಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ರಿಕೆಟ್ ಅಖಾಡದಲ್ಲೂ ಭಾರಿ ಕ್ರಾಂತಿಗೆ ಕಾರಣವಾಗಲಿದೆ. ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ತನ್ನ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಬಿಗ್ ಪ್ಲಾನ್ ರೂಪಿಸಿದೆ.