ದೀಪಾವಳಿ ಬಲಿಪಾಡ್ಯಮಿಯ ದಿನವಾದ ನವೆಂಬರ್ 10, ಮಂಗಳವಾರದಂದು ಷೇರು ಮಾರುಕಟ್ಟೆಗೆ ರಜೆ ಇದೆ. ಬಿಎಸ್ಇ ಮತ್ತು ಎನ್ಎಸ್ಇಯಲ್ಲಿ ಯಾವುದೇ ಟ್ರೇಡಿಂಗ್ ನಡೆಯುವುದಿಲ್ಲ. ಈ ನವೆಂಬರ್ನಲ್ಲಿ ಒಟ್ಟು ಎರಡು ರಜಾದಿನಗಳಿವೆ. ನವೆಂಬರ್ 10, ಮತ್ತು ನವೆಂಬರ್ 24ರಂದು ರಜೆ ಇದೆ. ನವೆಂಬರ್ 24, ಗುರುನಾನಕ್ ಜಯಂತಿ ಪ್ರಯುಕ್ತ ರಜೆ ಇರುತ್ತದೆ. ನವದೆಹಲಿ, ನವೆಂಬರ್ 9: ಮೊನ್ನೆ ದೀಪಾವಳಿ ಧನಲಕ್ಷ್ಮೀ ಪೂಜೆಯ ದಿನದಂದು ಮುಹೂರ್ತ ಟ್ರೇಡಿಂಗ್ ಕಂಡಿದ್ದ ಭಾರತದ ಷೇರು ಮಾರುಕಟ್ಟೆಗೆ ಮಂಗಳವಾರ ರಜಾದಿನ ಇರುತ್ತದೆ. ನವೆಂಬರ್ 10, ದೀಪಾವಳಿ ಬಲಿಪ್ರತಿಪಾದ ದಿನದ ಪ್ರಯುಕ್ತ ಷೇರು ವಿನಿಮಯ ಕೇಂದ್ರಗಳಾದ ಬಿಎಸ್ಇ ಮತ್ತು ಎನ್ಎಸ್ಇ ಬಂದ್ ಆಗಿರುತ್ತವೆ.