ಡಿಸೆಂಬರ್ 12ರಂದು ಅಖಿಲೇಶ್ ಯಾದವ್ ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ, 1990ರ ಕರಸೇವಕರ ಮೇಲಿನ ಗುಂಡೇಟಿಗೆ ಮೊದಲು ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ. ರಾಮಮಂದಿರ ದೇಣಿಗೆ ಅಕ್ರಮದ ಬಗ್ಗೆ ಅಖಿಲೇಶ್ ತಿರುಗೇಟು ನೀಡಿದ್ದಾರೆ. ಮುಂಬರುವ ಯುಪಿ ಚುನಾವಣೆ ದೃಷ್ಟಿಯಿಂದ ಈ ಭೇಟಿ ರಾಜಕೀಯ ಮಹತ್ವ ಪಡೆದುಕೊಂಡಿದೆ, ರಾಜಕೀಯ ವಾಗ್ದಾಳಿ ತೀವ್ರಗೊಂಡಿದೆ. ಅಯೋಧ್ಯೆ, ನವೆಂಬರ್ 08: ಉತ್ತರ ಪ್ರದೇಶದ ರಾಜಕೀಯದಲ್ಲಿ ಅಯೋಧ್ಯೆ ರಾಮಮಂದಿರ ಮತ್ತೆ ಚರ್ಚೆಯ ಕೇಂದ್ರವಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಡಿಸೆಂಬರ್ 12ರಂದು ರಾಮಮಂದಿರಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದಾರೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಅವರ ದೇವಸ್ಥಾನ ಭೇಟಿಗೆ ಸ್ವಾಗತವಿದೆ.