ಬೆಂಗಳೂರು: ಪತ್ರಕರ್ತರು ಹಾಗೂ ಮಾಧ್ಯಮದ ಗೆಳೆಯರಿಗಾಗಿ ಫೈವ್ಸ್ಟಾರ್ಸ್ ಸಂಸ್ಥೆ ಆಯೋಜಿಸಿರುವ ‘ಮೀಡಿಯಾ ಕಪ್’ನ ಆಟಗಾರರ ಹರಾಜು ಪ್ರಕ್ರಿಯೆ ನಗರದ ಖಾಸಗಿ ಕ್ಲಬ್ನಲ್ಲಿ ನಡೆಯಿತು.ಎವಿಆರ್ ಸಿನಿಮ್ಯ. ಇದೇ ವೇಳೆ ಎಲ್ಲ ತಂಡಗಳ ಜೆರ್ಸಿಗಳನ್ನು ಬಿಡುಗಡೆಗೊಳಿಸಲಾಯಿತು.ನಿಶ್ಚಿತ ಚಾಲೆಂಜರ್ಸ್ , ರಂಗ ಇಲೆವೆನ್, ಟೀಂ ಪರ್ವಂ , ಬಸವನಗುಡಿ ಸಾಯಿ ಕ್ರಿಕೆಟರ್ಸ್, ಸಿರ್ ಚಾಲೆಂಜರ್ಸ್, ದೇವ್ ಬ್ಯಾಟ್ಲಸ್, ಗುರು ಸುಜಯ್, ಕ್ರಿಕೆಟರ್ಸ್ , ಮರೈನ್ ಫೈಟರ್ಸ್ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಡಿಸೆಂಬರ್ ಮೊದಲ ವಾರದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಕೇವಲ ಮಾಧ್ಯಮ ಪ್ರತಿನಿಧಿಗಳಲ್ಲದೆ ಚಿತ್ರರಂಗದ ಕೆಲ ನಟರೂ ಕೂಡ ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದರು.