ಈ ವಾರ ಪತ್ರಗಳ ಟಾಸ್ಕ್ ನಡೆದಿತ್ತು. ಮನೆಯಿಂದ ಬಂದ ಪತ್ರಗಳನ್ನು ಗಳಿಸಿಕೊಳ್ಳಲು ಟಾಸ್ಕ್ ಆಡಿ ಗೆಲ್ಲಬೇಕಿತ್ತು. ಅದರಂತೆ ಹಲವರು ಟಾಸ್ಕ್ ಆಡಿ ಗೆದ್ದರು ಪತ್ರಗಳನ್ನು ಪಡೆದುಕೊಂಡರು. ಬಳಿಕ ಖುದ್ದು ಬಿಗ್ಬಾಸ್ ಟಾಸ್ಕ್ ನೀಡಿದರು. ಮನೆಯವರು ಸಹ ಸ್ಪರ್ಧಿಗೆ ಅನಾಮಿಕ ಪತ್ರ ಬರೆಯಬೇಕಿತ್ತು. ಅದರಂತೆ ಬರೆದ ಪತ್ರವನ್ನು ಯಾರಿಗೆ ಬರೆಯಲಾಗಿದೆಯೋ ಅವರು ಎಲ್ಲರ ಮುಂದೆ ಓದಿ ಅದನ್ನು ಹರಿದು, ಆ ಪತ್ರ ಯಾರು ಬರೆದಿದ್ದಾರೆಂದು ಊಹಿಸಿ ಅವರ ಮುಖಕ್ಕೆ ಎಸೆಯಬೇಕಿತ್ತು.