ಅತಿಥಿ ದೇವೋ ಭವ ಎಂದು ರಷ್ಯಾ ಮಹಿಳೆ ನೀಡಿದ ಟಿಪ್ಸ್ ವಾಪಸ್ ನೀಡಿದ ಕ್ಯಾಬ್ ಡ್ರೈವರ್ ಕಥೆ ವೈರಲ್. ಜಗತ್ತಿನಾದ್ಯಂತ ಭಾರತದ ಸಂಸ್ಕೃತಿ ಮತ್ತು ಅತಿಥಿ ಸತ್ಕಾರಕ್ಕೆ ವಿಶೇಷವಾದ ಸ್ಥಾನವಿದೆ. ನಮ್ಮ ದೇಶಕ್ಕೆ ಬರುವ ವಿದೇಶಿಗರು ಇಲ್ಲಿನ ಜನರ ಪ್ರೀತಿ ಮತ್ತು ಕಾಳಜಿಗೆ ಮಾರುಹೋಗಿರುವ ಅನೇಕ ಉದಾಹರಣೆಗಳಿವೆ. ಇದೀಗ ಅಂತಹದ್ದೇ ಒಂದು ಹೃದಯಸ್ಪರ್ಶಿ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಹೌದು, ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದ ರಷ್ಯಾದ ಮಹಿಳೆಯೊಬ್ಬರಿಗೆ ಕ್ಯಾಬ್ ಚಾಲಕನೊಬ್ಬ ತೋರಿದ.