Usman Khawaja: ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿ ಉಳಿದಿರುವ 2018ರ ದಕ್ಷಿಣ ಆಫ್ರಿಕಾ ಸರಣಿಯ ಬಾಲ್ ಟ್ಯಾಂಪರಿಂಗ್ (ಸ್ಯಾಂಡ್ಪೇಪರ್ಗೇಟ್) ಪ್ರಕರಣಕ್ಕೆ ಸಂಬಂಧಿಸಿದಂತೆ. ಕೇಪ್ ಟೌನ್ನ ನ್ಯೂಲ್ಯಾಂಡ್ಸ್ನಲ್ಲಿ ನಡೆದ ಆ ಸ್ಫೋಟಕ ಘಟನೆಗೂ ಮುನ್ನವೇ ಚೆಂಡನ್ನು ವಿರೂಪಗೊಳಿಸಲು ಬಳಸುವ ವಿಚಾರ ತಂಡದಲ್ಲಿದ್ದ ಎಲ್ಲರಿಗೂ ತಿಳಿದಿತ್ತು ಎಂದು ತಮ್ಮ ಆತ್ಮಕಥೆಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.ಉಸ್ಮಾನ್ ಖವಾಜಾ ತಮ್ಮ ನೂತನ ಆತ್ಮಕಥೆ ಸಬ್ರ್ (Sabr) ನಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಸಿಡ್ನಿ ಮಾರ್ನಿಂಗ್ ಹೆರಾಲ್ಡ್ನಲ್ಲಿ ಪ್ರಕಟವಾಗಿರುವ ಪುಸ್ತಕದ ಭಾಗಗಳ ಪ್ರಕಾರ, ಪೋರ್ಟ್ ಎಲಿಜಬೆತ್ನಲ್ಲಿ (ಪ್ರಸ್ತುತ ಗ್ಕೆಬರ್ಹಾ) ನಡೆದ ಎರಡನೇ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್ನಲ್ಲಿಯೇ ಚೆಂಡಿನ ಸ್ಥಿತಿಯನ್ನು ಬದಲಾಯಿಸುವ ಬಗ್ಗೆ ಮುಕ್ತವಾಗಿ ಚರ್ಚಿಸಲಾಗಿತ್ತು.