ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರ ಎಲಿಮಿನೇಷನ್ ಇರುವುದಿಲ್ಲ ಎಂಬ ಚರ್ಚೆ ಜೋರಾಗಿದೆ. ಕುಟುಂಬಸ್ಥರ ಪತ್ರಗಳು ಮತ್ತು ಭಾವನಾತ್ಮಕ ಸನ್ನಿವೇಶಗಳಿರುವ ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ವೋಟಿಂಗ್ ಅಥವಾ ನಿರ್ಗಮನದ ಯಾವುದೇ ಸುಳಿವು ನೀಡಲಾಗಿಲ್ಲ. ಇಂದಿನ ರಾತ್ರಿಯ ಸಂಚಿಕೆಯಲ್ಲಿ ಇದಕ್ಕೆ ಸ್ಪಷ್ಟನೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಬಿಗ್ ಬಾಸ್ ಕನ್ನಡ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಪ್ರತಿ ವಾರ ಶನಿವಾರದ ಸಂಚಿಕೆಗೂ ಮುನ್ನ ಪ್ರೋಮೋದಲ್ಲಿ ನಾಮಿನೇಟ್ ಆದವರು ಯಾರು, ಎಲಿಮಿನೇಟ್ ಆಗೋರು ಯಾರು ಎಂದು ಪ್ರಶ್ನೆ ಮಾಡುವಂತ ಪ್ರೋಮೋ ಬಿಡಲಾಗುತ್ತಿತ್ತು. ಆದರೆ ಈ ಬಾರಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಅದಕ್ಕೆ ಭಿನ್ನವಾದ ದೃಶ್ಯಗಳು ಕಂಡುಬಂದಿವೆ.