ನಟಿ ಶ್ರಿಯಾ ಶರಣ್ ಲೈವ್ ಚಾಟ್ ವೇಳೆ ಅಭಿಮಾನಿಯೊಬ್ಬ ಅಸಭ್ಯ ಕಾಮೆಂಟ್ ಮಾಡಿದ್ದರು. ಇದನ್ನು ಅವರ ಪತಿ ಆ್ಯಂಡ್ರಿ ಕೊಶ್ಚೀವ್ ಕೋಪಗೊಳ್ಳದೆ ಅದನ್ನು ಲಘುವಾಗಿ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರಿಸಿದ್ದರು. ಅವರು ಪರಿಸ್ಥಿತಿಯನ್ನು ಅತ್ಯಂತ ಪ್ರಬುದ್ಧವಾಗಿ ನಿಭಾಯಿಸಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರೀ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ನಟಿ ಶ್ರಿಯಾ ಶರಣ್ ಅವರು ಈಗ ಬಣ್ಣದ ಲೋಕದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರ ಅಭಿಮಾನಿ ತುಂಬಾನೇ ಕೆಟ್ಟದಾಗಿ ಕಮೆಂಟ್ ಮಾಡಿದ್ದು ಇದೆ.