ಮೈಸೂರು: ಆದಿಕವಿ ವಾಲ್ಮೀಕಿ ಮನುಕುಲದ ಮಹಾಜ್ಞಾನರತ್ನ ಎಂದು ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಕೆ.ಅಶೋಕ್ಕುಮಾರ್ ಬಣ್ಣಿಸಿದರು.ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾವಿಲಾಸ ಪದವಿಪ. ರಾಮಾಯಣ ಮಹಾಕಾವ್ಯದಲ್ಲಿ ವಾಲ್ಮೀಕಿ ಬರೆದ 24 ಸಾವಿರ ಶ್ಲೋಕಗಳು ಜಗತ್ತಿಗೆ ಬೆಳಕಾಗಿವೆ. ಸೀತೆಯ ಸಹನೆ, ಆತ್ಮಗೌರವ, ಲಕ್ಷ್ಮಣನ ಸೇವಾ ಮನೋಭಾವ, ಭರತನ ತ್ಯಾಗ, ಹನುಮಂತನ ಭಕ್ತಿನಿಷ್ಠೆ ಹಾಗೂ ರಾವಣನ ಅಹಂಕಾರ ಇವೆಲ್ಲವೂ ಮಾನವನ ಸ್ವಭಾವದ ವಿಭಿನ್ನ ಮುಖಗಳು. ರಾಮಾಯಣದ ಆದರ್ಶ ಗುಣಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಸರ್ವಕಾಲಕ್ಕೂ ಪ್ರಸ್ತುತವಾಗಿರುವ ರಾಮಾಯಣ ಕೇವಲ ರಾಮಚರಿತ್ರೆಯಲ್ಲ, ಅದು ಧರ್ಮ, ತ್ಯಾಗ, ಪ್ರೀತಿ, ಕರ್ತವ್ಯ, ಕುಟುಂಬದ ಮೌಲ್ಯಗಳನ್ನು ಸಾರುವ ಅಮರ ಮಹಾಕಾವ್ಯ ಎಂದರು.